Namma Samvidhaana

'ನಮ್ಮ ಸಂವಿಧಾನ' ವಿಡಿಯೋ ಸರಣಿ | 'Our Constitution' Video Series

ನಮ್ಮ ಸಂವಿಧಾನ' ವಿಡಿಯೋ ಸರಣಿ - ಪರಿಚಯ | Our Constitution' Video Series - Introduction

ಈ ವೀಡಿಯೊ ಭಾರತದ ಸಂವಿಧಾನದ ಬಗ್ಗೆ ಸಾಪ್ತಾಹಿಕ ವೀಡಿಯೊ-ಸರಣಿಯ ಪರಿಚಯ. ‘ನಮ್ಮ ಸಂವಿಧಾನ’ ವೀಡಿಯೊ-ಸರಣಿಯು ಭಾರತೀಯ ಸ್ವಾತಂತ್ರ್ಯ ದಿನ, 2020ರಂದು ಪ್ರಾರಂಭವಾಗಿ, ನವೆಂಬರ್ 26, 2020 ಸಂವಿಧಾನ ದಿನ (ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನದ ವಾರ್ಷಿಕೋತ್ಸವ) ದಂದು ಕೊನೆಗೊಳ್ಳುತ್ತದೆ.

This video is an introduction to a series of weekly videos about the Constitution of India, beginning on the Indian Independence Day of 2020 and ending on the Constitution Day on November 26th, 2020 (the anniversary of the day the Indian Constitution was adopted).

ನಮ್ಮ ಸಂವಿಧಾನ, ನಮ್ಮ ದಾರಿದೀಪ (ಸಂಚಿಕೆ-1) | Our Constitution, Our Guiding Light (Episode-1)

ಪ್ರಜೆಗಳ ಪರಸ್ಪರ ಮತ್ತು ರಾಷ್ಟ್ರ ದೊಂದಿಗೆ ಸಂವಾದಗಳಿಗೆ ನಮ್ಮ ಸಂವಿಧಾನ ನಮ್ಮ ದಾರಿದೀಪವಾಗಿದೆ. ನಮ್ಮ ದೇಶದ ಆಡಳಿತಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಬಲವಾದ ಅಡಿಪಾಯವನ್ನು ಹಾಕಿದೆ, ಮತ್ತು ಸಮಯದ ಪರೀಕ್ಷೆಯಲ್ಲಿ ಭದ್ರವಾಗಿ ನಿಂತಿದೆ. ಇದು ಭಾರತೀಯ ಸಂವಿಧಾನದ ಕಿರು-ಪರಿಚಯ!

For all interactions amongst the citizens, and between the citizens and the State, our Constitution has become our guiding light. It has laid a strong foundation for our country’s administration and for Indian democracy, and it has stood the test of time. This is a brief introduction to the Indian Constitution!

ನಮ್ಮ ಸಂವಿಧಾನದ ಪ್ರಸ್ತಾವನೆ - ಭಾರತದ ಚೇತನ (ಸಂಚಿಕೆ-2) | Preamble - The Spirit of India (Episode-2)

ಒಂದು ಸಂವಿಧಾನದ ಪ್ರಸ್ತಾವನೆ ಅದರ ತಯಾರಕರ ಉದ್ದೇಶಗಳು ಮತ್ತು ಸಂವಿಧಾನದ ಸಾರವನ್ನು, ಇಡೀ ದೇಶದ ಸಾರವನ್ನು, ರೂಪಿಸುವ ಪ್ರಮುಖ ಮೌಲ್ಯಗಳನ್ನು ಪ್ರಸ್ತುತಪಡಿಸುತ್ತದೆ. ನಮ್ಮ ಸಂವಿಧಾನದ ಪ್ರಸ್ತಾವನೆ ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಗಣರಾಜ್ಯ ಎಂದು ಘೋಷಿಸುತ್ತದೆ; ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳನ್ನು ಎಲ್ಲಾ ಪ್ರಜೆಗಳಿಗೂ ಭದ್ರಪಡಿಸುವುದಾಗಿ ಭರವಸೆ ನೀಡುತ್ತದೆ.

A Constitution’s preamble presents the intention of its framers, and also the core values and principles that form the essence of the Constitution and by extension, of the nation itself! Our Preamble declares India to be a sovereign, socialist, secular and democratic republic. It also promises to secure to all its citizens Justice, Equality, Liberty and Fraternity.

ಮೂಲಭೂತ ಹಕ್ಕುಗಳು - ನಮ್ಮ ಸಂವಿಧಾನದ ಆತ್ಮಸಾಕ್ಷಿ (ಸಂಚಿಕೆ- 3) | Fundamental Rights (Episode - 3)

ನಮ್ಮ ಸಂವಿಧಾನದ ಭಾಗ III ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ಘೋಷಿಸುತ್ತದೆ. ಭಾರತೀಯ ಸಮಾಜವು ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮುದಾಯಗಳಾಗಿ ವಿಭಜನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಮೂಲಭೂತ ಹಕ್ಕುಗಳು ಜನರಿಗೆ ಸುರಕ್ಷತೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತವೆ. ‘ಮೂಲಭೂತ ಹಕ್ಕುಗಳು’ ಎಂದರೆ ಏನು? ಅವುಗಳ ಉಲ್ಲಂಘನೆಯಾದರೆ ಏನು ಮಾಡಬಹುದು?

Part III of the Constitution declares the Fundamental Rights to each and every person in India. The Indian society is fragmented into many religious and cultural groups. In such a situation, Fundamental Rights provide a sense of safety and confidence to people. What are these 'Fundamental Rights'? What can one do if they are violated?

ಸಮಾನತೆಯ ಹಕ್ಕು (ಸಂಚಿಕೆ - 4) | Right to Equality (Episode - 4)

ಸಮಾನತೆಯ ಹಕ್ಕು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳಲ್ಲಿ ಮೊದಲನೆಯದು. ಆರ್ಟಿಕಲ್ 14 ರಿಂದ 18 ರವರೆಗೆ ಸಮಾನತೆಯ ಹಕ್ಕನ್ನು ವಿವರಿಸಲಾಗಿದೆ. ಸಮಾನತೆಯ ಹಕ್ಕು ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳಗಳ ಹೊರತಾಗಿಯೂ ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರ ಸಮಾನತೆಯನ್ನು ಎತ್ತಿಹಿಡಿಯುತ್ತದೆ. ನಮ್ಮ ಕಾನೂನು ಬಡವರ ವಿರುದ್ಧ ಶ್ರೀಮಂತರ ಪರವಾಗಿ, ಕೆಳಜಾತಿಯವರ ವಿರುದ್ಧ ಮೇಲ್ಜಾತಿಯ ಪರವಾಗಿ, ಮಹಿಳೆಯ ವಿರುದ್ಧ ಪುರುಷನ ಪರವಾಗಿ, ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮದ ಪರವಾಗಿ ತಾರತಮ್ಯ ಮಾಡುವಂತಿಲ್ಲ!

The Right to Equality is first among the Fundamental Rights enshrined in our Constitution. From Articles 14 to 18, it fortifies and upholds the equality of all citizens in the eyes of the law irrespective of the divisions of religion, race, caste, sex or place of birth. The Law shall not discriminate against the poor in favour of the rich, against a lower caste in favour of an upper caste, against a woman in favour of a man, against one religion in favour of another.

ಅಸ್ಪೃಶ್ಯತೆಯ ನಿರ್ಮೂಲನೆ (ಸಂಚಿಕೆ - 5) | Abolition of Untouchability (Episode - 5)

ದಲಿತರು ಸಾಂಪ್ರದಾಯಿಕವಾಗಿ ‘ಅಸ್ಪೃಶ್ಯರು’ ಎಂದು ಪರಿಗಣಿಸಲ್ಪಟ್ಟವರು ಮತ್ತು ಜಾತಿ ವ್ಯವಸ್ಥೆಯಿಂದ ಹೊರಗೆ ಇಡಲ್ಪಟ್ಟವರು. ಅಸ್ಪೃಶ್ಯತೆಯು ಕೆಲವು ಜಾತಿಗಳಿಗೆ ಸೇರಿದ ವ್ಯಕ್ತಿಗಳ ವಿರುದ್ಧ ಅವಮಾನಕರ ಮತ್ತು ಶೋಷಕ ಅಭ್ಯಾಸಗಳನ್ನು ಸಾಮಾನ್ಯೀಕರಿಸುವ ವಿದ್ಯಮಾನವಾಗಿದೆ. ನಮ್ಮ ಸಂವಿಧಾನದ ಆರ್ಟಿಕಲ್ 17 ಅಸ್ಪೃಶ್ಯತೆಯ ಎಲ್ಲಾ ಪ್ರಕಾರಗಳನ್ನು ನಿರ್ಮೂಲಿಸುತ್ತದೆ.

Dalits are persons who have traditionally been considered ‘untouchable’ and have been excluded from the caste system. Untouchability is a phenomenon that normalizes humiliating and exploitative practices against persons belonging to certain castes. Article 17 of our Constitution abolishes untouchability in all forms.

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (ಸಂಚಿಕೆ - 6) | Freedom of Speech and Expression (Episode - 6)

ಒಬ್ಬ ವ್ಯಕ್ತಿಯು ತನ್ನ ಆಲೋಚನೆಗಳನ್ನು ನಿರ್ಭಯವಾಗಿ ಮಾತನಾಡಲು ಮತ್ತು ವ್ಯಕ್ತಪಡಿಸಲು ಅವಕಾಶವನ್ನು ಹೊಂದಿರುವುದು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದೆ. ಏಕೆಂದರೆ ಪ್ರಜಾಪ್ರಭುತ್ವವು ಜನರ ಇಚ್ಚಾಶಕ್ತಿಯ ಅಭಿವ್ಯಕ್ತಿಯ ಮೂಲಕ ಕಾರ್ಯನಿರ್ವಹಿಸುತ್ತದೆ. ಸಂವಿಧಾನದ ಆರ್ಟಿಕಲ್ 19 ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಸ್ವಾತಂತ್ರ್ಯದ ಹಕ್ಕನ್ನು ಸ್ಪಷ್ಟಪಡಿಸುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಸ್ವಾತಂತ್ರ್ಯದ ಹಕ್ಕಿನ ಪ್ರಮುಖ ಅಂಶ. ನಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದೇವೆಂದರೆ, ಇದರ ನಿಜವಾದ ಅರ್ಥವೇನು?

It is an important feature of democracy that a person has the opportunity to speak and express her ideas fearlessly. This is because a democracy is the rule of the will of the people and operates through the expression of this will. Article 19 of the Constitution elucidates the Right to Freedom that every Indian citizen is entitled to. Freedom of Speech and Expression is the foremost aspect of the Right to Freedom. What does it truly mean to have the right to freely express our opinion?

ಆರ್ಟಿಕಲ್ 19 – ಇತರ ಸ್ವಾತಂತ್ರ್ಯಗಳು (ಸಂಚಿಕೆ - 7) | Article 19 – Other Freedoms (Episode - 7)

ಆರ್ಟಿಕಲ್ 19 ಆರು ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ: ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಶಾಂತಿಯುತವಾಗಿ ಮತ್ತು ಶಸ್ತ್ರಾಸ್ತ್ರಗಳಿಲ್ಲದೆ ಒಟ್ಟುಗೂಡುವ ಹಕ್ಕು, ಸಂಘ-ಸಂಸ್ಥೆಗಳನ್ನು ರಚಿಸುವ ಹಕ್ಕು, ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕು, ಭಾರತದ ಯಾವುದೇ ಭಾಗದಲ್ಲಿ ನೆಲೆಸುವ ಹಕ್ಕು, ಮತ್ತು ಯಾವುದೇ ವೃತ್ತಿಯನ್ನು ಅಭ್ಯಾಸ ಮಾಡುವ ಹಕ್ಕು. ಆದಾಗ್ಯೂ, ಈ ಹಕ್ಕುಗಳನ್ನು ‘ಸಮಂಜಸ ನಿರ್ಬಂಧ’ಗಳಿಗೆ ಒಳಪಡಿಸಲಾಗಿದೆ.

Article 19 guarantees six fundamental rights: the right to freedom of speech & expression, the right to assemble peaceably and without arms, the right to form associations / unions, the right to move freely throughout the territory of India, the right to reside and settle in any part of the territory of India, and the right to practise any profession, or to carry on any occupation / trade / business. However, these rights are subjected to ‘reasonable restrictions’.

ಕಾನೂನುಬಾಹಿರ ಬಂಧನದ ವಿರುದ್ಧ ರಕ್ಷಣೆ (ಸಂಚಿಕೆ - 8) | Protection Against Illegal Arrest (Episode - 8)

ನಮ್ಮ ಸಂವಿಧಾನದ ಆರ್ಟಿಕಲ್ 20, 21 ಮತ್ತು 22 ಪ್ರತಿಯೊಬ್ಬ ವ್ಯಕ್ತಿಯನ್ನು ಕಾನೂನುಬಾಹಿರ ಬಂಧನ, ಬಂಧನದಲ್ಲಿ ಹಿಂಸೆ ಮತ್ತು ಸಾವಿನ ವಿರುದ್ಧ ರಕ್ಷಿಸುತ್ತವೆ. ಆರ್ಟಿಕಲ್ 22 ಒಬ್ಬ ವ್ಯಕ್ತಿಯನ್ನು ಬಂಧಿಸುವ ಸರಿಯಾದ ಕಾರ್ಯವಿಧಾನವನ್ನು ಕಡ್ಡಾಯಗೊಳಿಸುತ್ತದೆ... ಆ ಮೂಲಕ ಕಾನೂನುಬಾಹಿರ ಬಂಧನದ ವಿರುದ್ಧ ಹಕ್ಕನ್ನು ನೀಡುತ್ತದೆ. ಅದು ಮೂಲಭೂತ ಹಕ್ಕು!

Articles 20, 21 and 22 of our Constitution safeguard each person against unlawful conviction, arrests, detention, and custodial torture and death. Article 22 mandates the proper procedure of arrest and detention of a person, thereby providing her with a right against unlawful arrest and detention. This is a fundamental right!

ಶೋಷಣೆಯ ವಿರುದ್ಧ ಹಕ್ಕು (ಸಂಚಿಕೆ - 9) | Right Against Exploitation (Episode - 9)

ಕಳ್ಳಸಾಗಣೆ ಎಂದರೆ ಬೆದರಿಕೆ, ಬಲ, ಬಲಾತ್ಕಾರ, ಅಪಹರಣ, ವಂಚನೆಯ ಮೂಲಕ, ಮಾನವರ ವ್ಯಾಪಾರ. ಇದು, ಲೈಂಗಿಕ ಶೋಷಣೆಗಾಗಿ ಅಥವಾ ಆರ್ಥಿಕ ಶೋಷಣೆಗಾಗಿ ಮಾಡಲಾಗುತ್ತದೆ. ಆರ್ಥಿಕ ಶೋಷಣೆ ಎಂದರೆ ವೇತನ ಇಲ್ಲದೆ, ಅಥವಾ ಅಲ್ಪ ಮೊತ್ತವನ್ನು ಕೊಟ್ಟು, ಯಾವುದೇ ಉದ್ಯೋಗ ಲಾಭಗಳು ಇಲ್ಲದೆ, ದೀರ್ಘಕಾಲ ವಿಶ್ರಾಂತಿ ಇಲ್ಲದೆ, ಆ ಕೆಲಸವನ್ನು ಬಿಡುವ ಆಯ್ಕೆ ಇಲ್ಲದೆ, ಪೂರ್ವಜರ ಸಾಲಗಳನ್ನು ತೀರಿಸುವ ಸಲುವಾಗಿ ಅಥವಾ ಜಾತಿ ಕಟ್ಟುಪಾಡುಗಳಿಂದ ಕೆಲಸ ಮಾಡಿಸಿಕೊಳ್ಳುವುದು. ನಮ್ಮ ಸಂವಿಧಾನದ ಆರ್ಟಿಕಲ್ 23 ಕಳ್ಳಸಾಗಣೆ ಮತ್ತು ಬಲವಂತದ ದುಡಿಮೆಯನ್ನು ನಿಷೇಧಿಸುತ್ತದೆ.

Trafficking is the trade of human beings, using threat, force, coercion, abduction, deception, use of force for economic exploitation or for sexual exploitation. Forced labour is when a person borrows money when under distress and in urgent need, the interest that is charged on such a loan is so high that it can lead to an endless cycle of repayment, sometimes across generations. Article 23 of our Constitution prohibits trafficking and forced labour.

ಆರ್ಟಿಕಲ್ 21 – ಜೀವನ ಹಕ್ಕು (ಸಂಚಿಕೆ - 10) | Article 21 – Right to Life (Episode - 10)

ಭಾರತೀಯ ಸಂವಿಧಾನವನ್ನು ಜೀವಂತ ದಾಖಲೆ ಎಂದು ಕರೆಯಲಾಗುತ್ತದೆ. ಏಕೆಂದರೆ, ಅದು ಸಮಾಜದ ನಿರಂತರವಾಗಿ ಬದಲಾಗುತ್ತಿರುವ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ವಿಕಸನಗೊಳ್ಳುತ್ತಿದೆ. ಆರ್ಟಿಕಲ್ 21 ಇದನ್ನು ಸಕ್ರಿಯಗೊಳಿಸುತ್ತಿದೆ. ಇದರ ವ್ಯಾಪ್ತಿ ವಿಸ್ತರಿಸುತ್ತಿದೆ. ಹೊಸ ಆಯಾಮಗಳನ್ನು ನ್ಯಾಯಾಲಯಗಳು ಪರಿಶೋಧಿಸುತ್ತಿವೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಜೀವನ ಮತ್ತು ಸ್ವಾತಂತ್ರ್ಯದ ಸಾರವನ್ನು ಖಾತರಿಪಡಿಸಿಕೊಳ್ಳಲು ಆರ್ಟಿಕಲ್ 21ರ ಪ್ರಯಾಣ ಇನ್ನೂ ಮುಂದುವರೆದಿದೆ. ಬನ್ನಿ, ಆರ್ಟಿಕಲ್ 21 ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ!

The Indian Constitution is known as a living document because it is ever evolving and matching the constantly progressing needs and requirements of the society. Article 21 is enabling this… its ambit is widening and new dimensions are being explored by the courts. The march of Article 21 still continues, to guarantee the essence of life and liberty to each and every one of us. Come, let’s learn more about Article 21!

ಶಿಕ್ಷಣದ ಹಕ್ಕು (ಸಂಚಿಕೆ - 11) | Right to Education (Episode - 11)

ಶಿಕ್ಷಣದ ಹಕ್ಕು ಮೂಲಭೂತ ಮಾನವ ಹಕ್ಕು. ನಮ್ಮ ಸಂವಿಧಾನದ ಆರ್ಟಿಕಲ್ 21-A, 6 ರಿಂದ 14 ವರ್ಷ ವಯಸ್ಸಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಕಡ್ಡಾಯಗೊಳಿಸುತ್ತದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009 ಪ್ರತಿ ಮಗುವಿಗೆ ನೆರೆಹೊರೆಯ ಶಾಲೆಯಲ್ಲಿ ತೃಪ್ತಿದಾಯಕ ಮತ್ತು ಗುಣಮಟ್ಟದ ಪ್ರಾಥಮಿಕ ಶಿಕ್ಷಣದ ಹಕ್ಕಿದೆ ಎಂದು ಘೋಷಿಸಿದೆ.

The right to education is a fundamental human right. Article 21-A of our Constitution makes it mandatory for the State to provide free and compulsory education to all children of the age of 6 to 14 years. The Right of Children to Free and Compulsory Education Act, 2009 ensures that every child has a right to full-time elementary education of satisfactory and equitable quality in a formal school in his/her neighbourhood.

ಧರ್ಮಸ್ವಾತಂತ್ರ್ಯದ ಹಕ್ಕುಗಳು (ಸಂಚಿಕೆ - 12) | Right to Freedom of Religion (Episode - 12)

ನಮ್ಮ ಸಂವಿಧಾನವು ಎಲ್ಲ ವ್ಯಕ್ತಿಗಳಿಗೆ ಅವರವರ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರಮಾಡಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಹಾಗೆಯೇ, ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ವ್ಯಕ್ತಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಶ್ರಮಿಸುತ್ತದೆ. ಇವೆರಡು ಸಹ ನಮ್ಮ ಸಂವಿಧಾನದ ಭಾಗ III ನ ಅಡಿಯಲ್ಲಿ ಮೂಲಭೂತ ಹಕ್ಕುಗಳು! ಎಲ್ಲ ವ್ಯಕ್ತಿಗಳು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ಅರ್ಹರಾಗಿರುತ್ತಾರೆ, ಮತ್ತು ತಮ್ಮ ತಮ್ಮ ಧರ್ಮವನ್ನು ಮುಕ್ತವಾಗಿ ಹೇಳಿಕೊಳ್ಳುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಸಂವಿಧಾನವು ಅಲ್ಪಸಂಖ್ಯಾತರಿಗೆ ಹಕ್ಕುಗಳನ್ನು ಖಾತರಿಪಡಿಸುವುದರಿಂದ ಈ ದೇಶದ ವೈವಿಧ್ಯತೆಯನ್ನು ಕಾಪಾಡಲಾಗುತ್ತದೆ… ಮತ್ತು ಎಲ್ಲಾ ಗುಂಪುಗಳಿಗೆ ಅವರ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಹೆಮ್ಮೆಯಿಂದ ಪ್ರಚಾರ ಮಾಡಲು ಮಾರ್ಗಗಳನ್ನು ತೆರೆಯಲಾಗುತ್ತದೆ.

Our Constitution not only provides freedom to all persons to profess, practice and propagate a religion, it also strives to protect the interests of persons belonging to minority groups. Both of these are fundamental rights under Part III of our Constitution! All persons in India are equally entitled to freedom of conscience, and have the right to freely profess, practice and propagate religion. The Constitution also guarantees rights to minorities so that the diversity of this country is preserved, and there are avenues for all groups, including marginalized ones, to protect, preserve, and propagate their culture.

ಸಾಂವಿಧಾನಿಕ ಪರಿಹಾರಗಳ ಹಕ್ಕು (ಸಂಚಿಕೆ - 13) | Right to Constitutional Remedies (Episode - 13)

ಕಳೆದ ಕೆಲವು ಸಂಚಿಕೆಗಳಲ್ಲಿ, ನಮ್ಮ ಸಂವಿಧಾನವು ಖಾತರಿಪಡಿಸುವ ವಿವಿಧ ಮೂಲಭೂತ ಹಕ್ಕುಗಳ ಬಗ್ಗೆ ನಾವು ಚರ್ಚಿಸುತ್ತ ಬಂದಿದ್ದೇವೆ. ಆದರೆ, ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯ ಸಂದರ್ಭದಲ್ಲಿ ನಮಗೆ ನ್ಯಾಯವನ್ನು ಒದಗಿಸಲು ಯಾವ ಕಾರ್ಯವಿಧಾನವಿದೆ? ಆರ್ಟಿಕಲ್ 32 ನಮ್ಮ ಸಂವಿಧಾನದ ಭಾಗ IIIರಲ್ಲಿದೆ. ಈ ಆರ್ಟಿಕಲ್ ಒಬ್ಬ ವ್ಯಕ್ತಿಯು ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ನಂಬಿದ್ದರೆ, ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಈ ಕಾರ್ಯವಿಧಾನವೇ ಒಂದು ಮೂಲಭೂತ ಹಕ್ಕು! ಇದನ್ನು ‘ಸಾಂವಿಧಾನಿಕ ಪರಿಹಾರಗಳ ಹಕ್ಕು’ ಎಂದು ಕರೆಯಲಾಗುತ್ತದೆ.

Over the last few episodes, we have been discussing the various fundamental rights that are guaranteed by our Constitution. But, what mechanisms exist to ensure that justice is ensured in case of violation of our fundamental rights? Article 32, which is also present in Part III of our Constitution, allows an individual to approach the Supreme Court if she/he believes that her/his fundamental rights have been violated. This itself is a fundamental right! It is known as the ‘Right to Constitutional Remedies’.

ನಮ್ಮ ಸಂವಿಧಾನ - ಒಂದು ನಿರಂತರ ಪಯಣ | Our Constitution - An Eternal Journey

ಆಗಸ್ಟ್ 15 ರಂದು, ನಮ್ಮ ಸ್ವಾತಂತ್ರ್ಯ ದಿನದಿಂದ ಪ್ರಾರಂಭವಾದ ಈ ವೀಡಿಯೋ ಸರಣಿಯು, ಪ್ರತಿ ವಾರ ಒಂದು ವೀಡಿಯೊವನ್ನು ನಿಮ್ಮ ಬಳಿಗೆ ತಂದಿದೆ. ನಮ್ಮ ರಾಷ್ಟ್ರದ ಪ್ರಮುಖ ಕಾನೂನು ದಾಖಲೆಯಾದ ಸಂವಿಧಾನದ ವಿವಿಧ ಅಂಶಗಳನ್ನು ನಿಮ್ಮ ಮುಂದಿಟ್ಟಿದೆ. ವೀಡಿಯೋ ಸರಣಿಯ ಅವಧಿಯಲ್ಲಿ, ನಾವು ಸಂವಿಧಾನದ ಅರ್ಥವನ್ನು ಕಲಿತಿದ್ದೇವೆ ಮತ್ತು ಅದರ ಪ್ರಸ್ತಾವನೆ ಭಾರತದ ಸ್ವರೂಪವನ್ನು ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದರ ಬಗ್ಗೆ ಕಲಿತಿದ್ದೇವೆ. ಸಂವಿಧಾನವು ದೇಶದ ಗಡಿಯೊಳಗಿನ ಎಲ್ಲಾ ವ್ಯಕ್ತಿಗಳಿಗೆ ಅಥವಾ ನಾಗರಿಕರಿಗೆ, ಅವರ ಅಸ್ತಿತ್ವದ ಕಾರಣದಿಂದ, ಖಾತರಿಪಡಿಸುವ ಕೆಲವು ಅಳಿಸಲಾಗದ ಹಕ್ಕುಗಳ ಬಗ್ಗೆಯೂ ನಾವು ಕಲಿತಿದ್ದೇವೆ.

ಈ ವೀಡಿಯೊ ಸರಣಿಯು ನವೆಂಬರ್ 26 ರಂದು ಮುಕ್ತಾಯಗೊಳ್ಳುತ್ತಿದೆ...ಭಾರತೀಯ ಇತಿಹಾಸದ ವರ್ಷಗಳಲ್ಲಿ ಇದು ಒಂದು ಹೆಗ್ಗುರುತು ದಿನ. 1949 ರಲ್ಲಿ ಈ ದಿನವೇ ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು.

ಈ ಸಂಚಿಕೆಯಲ್ಲಿ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಮತ್ತು ಕರ್ನಾಟಕ ಹೈಕೋರ್ಟ್ ನ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್ ಅವರು ನಮ್ಮ ಸಂವಿಧಾನ ರಚನೆಯ ಪ್ರಕ್ರಿಯೆಯನ್ನು ನಮಗೆ ಅರ್ಥಮಾಡಿಸಿ, ಪ್ರಸ್ತುತ ಕಾಲದಲ್ಲಿ ಅದರ ಮಹತ್ವವನ್ನು ವಿವರಿಸುತ್ತಾರೆ.

Starting from our Independence Day on August 15th, this video series has brought to you one video almost every week, highlighting the pre-eminent legal document of our nation, the Constitution. During the course of the series, we have learnt the meaning of the Constitution, about how its Preamble defines the very character of India and the inalienable rights that the Constitution bestows on all persons or citizens within the boundaries of the country by virtue of their very existence.

This video series culminates today on the 26th of November; a landmark day in the annals of Indian history. It was on this day in 1949 that the Constitution of India was adopted.

In this final video of the series, former Advocate General of Karnataka and, currently, Senior Counsel in the High Court of Karnataka, Professor Ravivarma Kumar, helps us understand the process of drafting of the Constitution and its continued significance in current times.